Wednesday, 23 October 2013

ಜಯ ಭಾರತ ಜನನಿಯ ತನುಜಾತೆ

ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ!
ಜಯ ಸುಂದರ ನದಿ ವನಗಳ ನಾಡೇ, ಜಯ ಹೇ ರಸಋಷಿಗಳ ಬೀಡೆ!
ಜಯ ಭಾರತ ಜನನಿಯ ತನುಜಾತೆ,  ಜಯ ಹೇ ಕರ್ನಾಟಕ ಮಾತೆ!

ಭೂದೇವಿಯ ಮಕುಟದ ನವಮಣಿಯೆ,
ಗಂಧದ ಚಂದದ ಹೊನ್ನಿನ ಗಣಿಯೆ;
ರಾಘವ ಮಧುಸೂಧನರವತರಿಸಿದ ಭಾರತ ಜನನಿಯ ತನುಜಾತೆ !

ಜಯ ಭಾರತ ಜನನಿಯ ತನುಜಾತೆ! ಜಯ ಹೇ ಕರ್ನಾಟಕ ಮಾತೆ!

ಜನನಿಯ ಜೋಗುಳ ವೇದದ ಘೋಷ,
ಜನನಿಗೆ ಜೀವವು ನಿನ್ನಾವೇಶ,
ಹಸುರಿನ ಗಿರಿಗಳ ಸಾಲೇ,
ನಿನ್ನಯ ಕೊರಳಿನ ಮಾಲೆ,
ಕಪಿಲ ಪತಂಜಲ ಗೌತಮ ಜಿನನುತ,

ಭಾರತ ಜನನಿಯ ತನುಜಾತೆ ! ಜಯ ಹೇ ಕರ್ನಾಟಕ ಮಾತೆ!
ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ!

ಶಂಕರ ರಾಮಾನುಜ ವಿದ್ಯಾರಣ್ಯ,
ಬಸವೇಶ್ವರ ಮಧ್ವರ ದಿವ್ಯಾರಣ್ಯ ರನ್ನ ಷಡಕ್ಷರಿ ಪೊನ್ನ,
ಪಂಪ ಲಕುಮಿಪತಿ ಜನ್ನ ಕುಮಾರವ್ಯಾಸರ ಮಂಗಳ ಧಾಮ,
ಕವಿ ಕೋಗಿಲೆಗಳ ಪುಣ್ಯಾರಾಮ ನಾನಕ ರಾಮಾ ನಂದ ಕಬೀರರ

ಜಯ ಹೇ ಕರ್ನಾಟಕ ಮಾತೆ! ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ!

ತೈಲಪ ಹೊಯ್ಸಳರಾಳಿದ ನಾಡೇ,
ಡಂಕಣ ಜಕಣರ ನೆಚ್ಚಿನ ಬೀಡೆ ಕೃಷ್ಣ ಶರಾವತಿ ತುಂಗಾ,
ಕಾವೇರಿಯ ವರ ರಂಗಾ ಚೈತನ್ಯ ಪರಮಹಂಸ ವಿವೇಕರ,

ಭಾರತ ಜನನಿಯ ತನುಜಾತೆ ! ಜಯ ಹೇ ಕರ್ನಾಟಕ ಮಾತೆ!
ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ!

ಸರ್ವ ಜನಾಂಗದ ಶಾಂತಿಯ ತೋಟ,
ರಸಿಕರ ಕಂಗಳ ಸೆಳೆಯುವ ನೋಟ ಹಿಂದೂ ಕ್ರೈಸ್ತ ಮುಸಲ್ಮಾನ,
ಪಾರಸಿಕ ಜೈನರುದ್ಯಾನ ಜನಕನ ಹೋಲುವ ದೊರೆಗಳ ಧಾಮ,
ಗಾಯಕ ವೈಣಿಕರಾರಾಮ ಕನ್ನಡ ನುಡಿ ಕುಣಿದಾಡುವ ಗೇಹ,
ಕನ್ನಡ ತಾಯಿಯ ಮಕ್ಕಳ ದೇಹ

ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ
ಜಯ ಸುಂದರ ನದಿ ವನಗಳ ನಾಡೇ, ಜಯ ಹೇ ರಸಋಷಿಗಳ ಬೀಡೆ!
ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ!

.......ಕೊಡುಗೆ  : http://en.wikipedia.org/wiki/Jaya_Bharata_Jananiya_Tanujate
 

Wednesday, 23 November 2011

ನುಡಿಗಳು - ೧

- ರಸವೆ ಜನನ
ವಿರಸವೆ ಮರಣ
ಸಮರಸವೇ ....... ಜೀವನ -> ದ. ರಾ. ಬೇಂದ್ರೆ

- ತಡವಾಗಿಯಾದರು ಹೊಡೆದೆ ..... ದಡ ಸೇರೋಹಂಗೆ ಹೊಡೆದೆ ಬಿಡು

Friday, 7 January 2011

ಲೈಫ್ ನ ವಾಸ್ತವ .....

ಮನಸು ಇದ್ದರೆ ಬಾ ಅನ್ನೋದು ಪ್ರೀತಿ
ದುಡ್ಡು ಇದ್ದರೆ ಬಾ ಅನ್ನೋದು ಸಂಬಂಧ [ ಎಲ್ಲಾ ಸಂಬಂಧಗಳಿಗೂ ಅನ್ವಯಿಸುವುದಿಲ್ಲ ]
ಏನು ಇಲದೆ ಇದ್ರೂ ನಾನು ಇದ್ದೀನಿ ನೀ ಬಾ ಅನ್ನೋದು ಸ್ನೇಹ ...........

ಲೈಫು ಇಷ್ಟೇನೇ .......


ಎದ್ದರೆ ತಿಂಡಿಗೆ ಇಡ್ಲಿ ..... ಇಲ್ಲಾಂದ್ರೆ ತಿತಿಗೆ ವಡೆ ........

Wednesday, 18 November 2009

ಅರ್ಪಣೆ : ಕನ್ನಡವ ಕನ್ನಡಿಸಿ


"ಕನ್ನಡವ ಕನ್ನಡಿಸಿ ಕನ್ನಡಿಗರೆಲ್ಲರಿಗೆ
ಕನ್ನಡದ ಕನ್ನಡಿ ಅದೇನೆಂದು ತೋರಿ
ಕನ್ನಡವು ಕನ್ನಡಿಯು ತಾ ಬೇರೆಯಲ್ಲ
ಕನ್ನಡಿಯ ನೋಡವನ ಕನ್ನಡಿಗನಲ್ಲ
ಎನ್ನುತ್ತ ಬೆಳಗಿನದ ಕನ್ನದಜಾಣ
ಚೆನ್ನಪ್ಪ ಉತ್ತಂಗಿ ಸರ್ವಜ್ಞ ಕಾಣ "

ನಾಡಿನ ಮಹಾಶರಣರಾದ , ಸಾಕ್ಷಾತ್ ಸರ್ವಜ್ಞರಾದ
ಉತ್ತಂಗಿ ಚೆನ್ನಪ್ಪನವರ ಅಡಿದಾವರೆಗೆ ಅರ್ಪಿತ
- ಹೀ. ಚಿ. ಶಾಂತವೀರಯ್ಯ
- ಹೆಚ್. ಎಸ್. ಶ್ರೀದೇವಿ ಕುಮ್ಮೂರ್

ಸರ್ವಜ್ಞ ವಚನಗಳು
ವಾಸನ್ ಪಬ್ಲಿಕೇಷನ್ಸ್
ಬೆಂಗಳೂರು

Tuesday, 17 November 2009

ಕನ್ನಡದ ಮಹಾಪುರುಷರು

ಈ ಏಳು ಜನ ಮಹಾ ಪುರುಷರು ಆಕಾಶವಾಣಿ ಮೈಸೂರಿನಲ್ಲಿ [ ೧೯೫೫ ] ಕಾರ್ಯಕ್ರಮದ ಚರ್ಚೆಗೆಂದು ಕುಳಿತಾಗ ಟಿ. ಎಸ್. ನಾಗರಾಜನ್ ರವರು ತೆಗೆದ ಚಿತ್ರ




ಮಾಸ್ತಿ ವೆಂಕಟೇಶ್ Iyengarರವರು , ಡಿ. ವಿ. ಗುಂಡಪ್ಪನವರು , ಕೆ. ವಿ. ಪುಟಪ್ಪನವರು [ಕುವೆಂಪುರವರು] , ಎಂ. ವಿ. ಸೀತಾರಾಮಯ್ಯನವರು , ಕೆ. ಶಿವರಾಮ ಕಾರಂತರವರು , ಅ. ನ. ಕೃಷ್ಣ ರಾವ್ ರವರು ಮತ್ತು ಜಿ. ಪಿ. ರಾಜರತ್ನಂ ರವರು

ವಿವರ : http://churumuri.wordpress.com/2008/09/09/seven-for-the-album-a-picture-worth-7000-words/

Saturday, 15 August 2009

ಹಿತ ಚಾರಣ

ಧರ್ಮ ನಿರ್ಣಯ ಜನ್ಮ ಜನ್ಮಾಂತರದ ಕರ್ಮ
ಧರ್ಮದ ಹೆಸರಿನಲೆ ಅಧರ್ಮವ ಗಣಿಸಿದರೆ
ಮಿಕ್ಕೆಲ್ಲ ಜಗವು ನಿನ್ನನು ಒತ್ತಟ್ಟಿಗಿಡುವುದು
ಅದನ್ನು ಸಾಧಿಪ ವಿಜಯವೆಂದು ತಿಳಿಯದಿರು ಮರುಳೆ !

ಜಗಕೆ ಬೇಕು ಸಂತಸ , ಬೇಡ ಸಂತಾಪ,
ಅದನರಿತು ಸರ್ವಹಿತ ಜೀವನಧರ್ಮವ ಧರಿಸಿ,
ಲೋಕದ ಸನ್ಮಾರ್ಗದ ಬದುಕಿನ ಹಿತಚಾರಣಕೆ
ಎಲ್ಲರೂ ಸಂಭ್ರಮದಿ ನೆರವಾಗಲೇ ಬೇಕು ಶಾಂತಿ ಪಯಣಕೆ !

ಮನುಜ ಜೀವಿತವೆಲ್ಲ ಧ್ವನಿಗೆ ಪ್ರತಿಧ್ವನಿಯಂತಿರಲಿ,
ಭಯೋತ್ಪಾದಕರು ಉತ್ಪಾದಿಸುವ ಜೀವ ಭಯ ದೂರವಾಗಲಿ,
ಕದನವ ತೆರೆದೆ ಬದುಕು ಸಾಗದೆ ಚಿರವಿವೇಕದಿ;
ಬೆಳೆದು ನಲುಮೆಯಿಂದ ಧೃತಿ ತಳೆದು ಇಳೆಯುಳಿಸಿ !
- ಬಿ. ಎಂ. ಮಂಜುಳ
ಶಿಕ್ಷಕಿ