Thursday 11 June 2009

ಕನ್ನಡ ವರ್ಣಮಾಲೆ

ಹೊಸಗನ್ನಡ ವ್ಯಾಕರಣ ಛಂದಸ್ಸು ವ್ಯಾವಹಾರಿಕ ಕನ್ನಡ -- ಪುಸ್ತಕದ ಭಾಗಗಳು
ಡಾ. ಟಿ. ವಿ. ವೆಂಕಟಾಚಲಶಾಸ್ತ್ರಿ - ಡಾ. ಕೆ. ಆರ್. ಗಣೇಶ್ - ಪ್ರೊ. ಜಿ. ಅಶ್ವತ್ಥ ನಾರಾಯಣ
ಕನ್ನಡ ಸಾಹಿತ್ಯ ಪರಿಷತ್ತು


ಕನ್ನಡ ವರ್ಣಮಾಲೆ

ಅಕ್ಷರಗಳಿಗೆ ವರ್ಣಗಳೆಂದೂ ಹೆಸರು. ಈ ವರ್ಣಗಳನ್ನು , ಅವುಗಳ ಸ್ವರೂಪ ಹಾಗೂ ಉತ್ಪತ್ತಿಸ್ಥಾನಗಳನ್ನು ಹಿಡಿದು ಕೆಲವು ಗುಂಪುಗಳನ್ನಾಗಿ ವಿಂಗಡಿಸುತ್ತಾರೆ.
ಹೀಗೆ ವಿಂಗಡಿಸಿ , ಒಂದು ಗೊತ್ತಾದ ಕ್ರಮದಲ್ಲಿ ಬರೆದ ವರ್ಣಗಳ ಸಮುದಾಯವೇ ವರ್ಣಮಾಲೆ.
ಕನ್ನಡ ಭಾಷೆಗೂ ಒಂದು ವರ್ಣಮಾಲೆಯಿದೆ ; ಬರೆವಣಿಗೆಯ ಲಿಪಿಯಿದೆ.

ವರ್ಣಗಳು : ಕನ್ನಡ ವರ್ಣಮಾಲೆಯ ವರ್ಣಗಳು ಕ್ರಮವಾಗಿ ಸ್ವರ , ಯೋಗವಾಹ ಮತ್ತು ವ್ಯಂಜನ [ ವರ್ಗೀಯ , ಅವರ್ಗೀಯ ]ಗಳೆಂದು ವಿಭಜನೆಗೊಳ್ಳುತ್ತವೆ.

ಸ್ವರಗಳು :
ಅ ಆ ಇ ಈ ಉ ಊ ಋ ೠ ಎ ಏ ಐ ಒ ಓ ಔ

ಯೋಗವಾಹಗಳು :
ಅಂ ಆಃ

ವರ್ಗೀಯ
ವ್ಯಂಜನಗಳು :
ಕ ಖ ಗ ಘ ಙ
ಚ ಛ ಜ ಝ ಞ
ಟ ಠ ಡ ಢ ಣ
ತ ಥ ದ ಧ ನ
ಪ ಫ ಬ ಭ ಮ


ಅವರ್ಗೀಯ ವ್ಯಂಜನಗಳು :
ಯ ರ ಲ ವ ಶ ಷ ಸ ಹ ಳ