Wednesday 18 November 2009

ಅರ್ಪಣೆ : ಕನ್ನಡವ ಕನ್ನಡಿಸಿ


"ಕನ್ನಡವ ಕನ್ನಡಿಸಿ ಕನ್ನಡಿಗರೆಲ್ಲರಿಗೆ
ಕನ್ನಡದ ಕನ್ನಡಿ ಅದೇನೆಂದು ತೋರಿ
ಕನ್ನಡವು ಕನ್ನಡಿಯು ತಾ ಬೇರೆಯಲ್ಲ
ಕನ್ನಡಿಯ ನೋಡವನ ಕನ್ನಡಿಗನಲ್ಲ
ಎನ್ನುತ್ತ ಬೆಳಗಿನದ ಕನ್ನದಜಾಣ
ಚೆನ್ನಪ್ಪ ಉತ್ತಂಗಿ ಸರ್ವಜ್ಞ ಕಾಣ "

ನಾಡಿನ ಮಹಾಶರಣರಾದ , ಸಾಕ್ಷಾತ್ ಸರ್ವಜ್ಞರಾದ
ಉತ್ತಂಗಿ ಚೆನ್ನಪ್ಪನವರ ಅಡಿದಾವರೆಗೆ ಅರ್ಪಿತ
- ಹೀ. ಚಿ. ಶಾಂತವೀರಯ್ಯ
- ಹೆಚ್. ಎಸ್. ಶ್ರೀದೇವಿ ಕುಮ್ಮೂರ್

ಸರ್ವಜ್ಞ ವಚನಗಳು
ವಾಸನ್ ಪಬ್ಲಿಕೇಷನ್ಸ್
ಬೆಂಗಳೂರು

Tuesday 17 November 2009

ಕನ್ನಡದ ಮಹಾಪುರುಷರು

ಈ ಏಳು ಜನ ಮಹಾ ಪುರುಷರು ಆಕಾಶವಾಣಿ ಮೈಸೂರಿನಲ್ಲಿ [ ೧೯೫೫ ] ಕಾರ್ಯಕ್ರಮದ ಚರ್ಚೆಗೆಂದು ಕುಳಿತಾಗ ಟಿ. ಎಸ್. ನಾಗರಾಜನ್ ರವರು ತೆಗೆದ ಚಿತ್ರ




ಮಾಸ್ತಿ ವೆಂಕಟೇಶ್ Iyengarರವರು , ಡಿ. ವಿ. ಗುಂಡಪ್ಪನವರು , ಕೆ. ವಿ. ಪುಟಪ್ಪನವರು [ಕುವೆಂಪುರವರು] , ಎಂ. ವಿ. ಸೀತಾರಾಮಯ್ಯನವರು , ಕೆ. ಶಿವರಾಮ ಕಾರಂತರವರು , ಅ. ನ. ಕೃಷ್ಣ ರಾವ್ ರವರು ಮತ್ತು ಜಿ. ಪಿ. ರಾಜರತ್ನಂ ರವರು

ವಿವರ : http://churumuri.wordpress.com/2008/09/09/seven-for-the-album-a-picture-worth-7000-words/

Saturday 15 August 2009

ಹಿತ ಚಾರಣ

ಧರ್ಮ ನಿರ್ಣಯ ಜನ್ಮ ಜನ್ಮಾಂತರದ ಕರ್ಮ
ಧರ್ಮದ ಹೆಸರಿನಲೆ ಅಧರ್ಮವ ಗಣಿಸಿದರೆ
ಮಿಕ್ಕೆಲ್ಲ ಜಗವು ನಿನ್ನನು ಒತ್ತಟ್ಟಿಗಿಡುವುದು
ಅದನ್ನು ಸಾಧಿಪ ವಿಜಯವೆಂದು ತಿಳಿಯದಿರು ಮರುಳೆ !

ಜಗಕೆ ಬೇಕು ಸಂತಸ , ಬೇಡ ಸಂತಾಪ,
ಅದನರಿತು ಸರ್ವಹಿತ ಜೀವನಧರ್ಮವ ಧರಿಸಿ,
ಲೋಕದ ಸನ್ಮಾರ್ಗದ ಬದುಕಿನ ಹಿತಚಾರಣಕೆ
ಎಲ್ಲರೂ ಸಂಭ್ರಮದಿ ನೆರವಾಗಲೇ ಬೇಕು ಶಾಂತಿ ಪಯಣಕೆ !

ಮನುಜ ಜೀವಿತವೆಲ್ಲ ಧ್ವನಿಗೆ ಪ್ರತಿಧ್ವನಿಯಂತಿರಲಿ,
ಭಯೋತ್ಪಾದಕರು ಉತ್ಪಾದಿಸುವ ಜೀವ ಭಯ ದೂರವಾಗಲಿ,
ಕದನವ ತೆರೆದೆ ಬದುಕು ಸಾಗದೆ ಚಿರವಿವೇಕದಿ;
ಬೆಳೆದು ನಲುಮೆಯಿಂದ ಧೃತಿ ತಳೆದು ಇಳೆಯುಳಿಸಿ !
- ಬಿ. ಎಂ. ಮಂಜುಳ
ಶಿಕ್ಷಕಿ

Saturday 11 July 2009

ಬೊಮ್ಮನಹಳ್ಳಿಯ ಕಿಂದರಜೋಗಿ

ಶೀಘ್ರದಲ್ಲಿ .......
ಬೆಂಗಳೂರು ೫ ನೆ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ ಬೊಮ್ಮನಹಳ್ಳಿಯ ಕಿಂದರಜೋಗಿ ನೃತ್ಯ ರೂಪಕ ನಾಟಕದ ಒಂದು ಬರಹ ..







Thursday 11 June 2009

ಕನ್ನಡ ವರ್ಣಮಾಲೆ

ಹೊಸಗನ್ನಡ ವ್ಯಾಕರಣ ಛಂದಸ್ಸು ವ್ಯಾವಹಾರಿಕ ಕನ್ನಡ -- ಪುಸ್ತಕದ ಭಾಗಗಳು
ಡಾ. ಟಿ. ವಿ. ವೆಂಕಟಾಚಲಶಾಸ್ತ್ರಿ - ಡಾ. ಕೆ. ಆರ್. ಗಣೇಶ್ - ಪ್ರೊ. ಜಿ. ಅಶ್ವತ್ಥ ನಾರಾಯಣ
ಕನ್ನಡ ಸಾಹಿತ್ಯ ಪರಿಷತ್ತು


ಕನ್ನಡ ವರ್ಣಮಾಲೆ

ಅಕ್ಷರಗಳಿಗೆ ವರ್ಣಗಳೆಂದೂ ಹೆಸರು. ಈ ವರ್ಣಗಳನ್ನು , ಅವುಗಳ ಸ್ವರೂಪ ಹಾಗೂ ಉತ್ಪತ್ತಿಸ್ಥಾನಗಳನ್ನು ಹಿಡಿದು ಕೆಲವು ಗುಂಪುಗಳನ್ನಾಗಿ ವಿಂಗಡಿಸುತ್ತಾರೆ.
ಹೀಗೆ ವಿಂಗಡಿಸಿ , ಒಂದು ಗೊತ್ತಾದ ಕ್ರಮದಲ್ಲಿ ಬರೆದ ವರ್ಣಗಳ ಸಮುದಾಯವೇ ವರ್ಣಮಾಲೆ.
ಕನ್ನಡ ಭಾಷೆಗೂ ಒಂದು ವರ್ಣಮಾಲೆಯಿದೆ ; ಬರೆವಣಿಗೆಯ ಲಿಪಿಯಿದೆ.

ವರ್ಣಗಳು : ಕನ್ನಡ ವರ್ಣಮಾಲೆಯ ವರ್ಣಗಳು ಕ್ರಮವಾಗಿ ಸ್ವರ , ಯೋಗವಾಹ ಮತ್ತು ವ್ಯಂಜನ [ ವರ್ಗೀಯ , ಅವರ್ಗೀಯ ]ಗಳೆಂದು ವಿಭಜನೆಗೊಳ್ಳುತ್ತವೆ.

ಸ್ವರಗಳು :
ಅ ಆ ಇ ಈ ಉ ಊ ಋ ೠ ಎ ಏ ಐ ಒ ಓ ಔ

ಯೋಗವಾಹಗಳು :
ಅಂ ಆಃ

ವರ್ಗೀಯ
ವ್ಯಂಜನಗಳು :
ಕ ಖ ಗ ಘ ಙ
ಚ ಛ ಜ ಝ ಞ
ಟ ಠ ಡ ಢ ಣ
ತ ಥ ದ ಧ ನ
ಪ ಫ ಬ ಭ ಮ


ಅವರ್ಗೀಯ ವ್ಯಂಜನಗಳು :
ಯ ರ ಲ ವ ಶ ಷ ಸ ಹ ಳ

Friday 8 May 2009

ನುಡಿಗಳು

- ಅಭಿಮಾನದಿಂದ ಬಳಸಿರಿ ಕನ್ನಡ
ಸಮೃದ್ಧಿ ಯಿಂದ ಬೆಳೆವುದು ಸಿರಿಗನ್ನಡ

- ನಿಲ್ಲದಿರು ಗುರಿ ಸೇರುವವರೆಗೆ

- ತಪ್ಪು ಕಂಡಲ್ಲಿ ಖಂಡಿಸಿ

- ಭೂಮಿಯ ಗೆದ್ದರೆ ರಾಜ್ಯ ....
ಮನದಾಸೆಯ ಗೆದ್ದವ ಪೂಜ್ಯ ....

- ನೀ ನನಗಾದರೆ ..............ನಾ ನಿನಗೆ !!!!!!!!

- ಉದಯಿಸುವ ಆ ಸೂರ್ಯ
ದಿನದ ಶುಭಾರಂಭದ ಸೂಚನೆಯಾದರೆ
ನಗುವ ಈ ನಿನ್ನ ಮುಖ
ಸದಾಕಾಲ ಗೆಲುವಿನ ಮುನ್ಸೂಚನೆಯಲ್ಲವೆ......?